Please note that Tapas no longer supports Internet Explorer.
We recommend upgrading to the latest Microsoft Edge, Google Chrome, or Firefox.
Home
Comics
Novels
Community
Mature
More
Help Discord Forums Newsfeed Contact Merch Shop
Publish
Home
Comics
Novels
Community
Mature
More
Help Discord Forums Newsfeed Contact Merch Shop
__anonymous__
__anonymous__
0
  • Publish
  • Ink shop
  • Redeem code
  • Settings
  • Log out

ಸನಾತನ ಸಂಸ್ಕೃತಿ

ಹರಿದಾಸರೊಡನಾಡು, ಸುಳಾದಿ_ ,_ಶ್ರೀವಿಜಯದಾಸರ ರಚನೆ,_

ಹರಿದಾಸರೊಡನಾಡು, ಸುಳಾದಿ_ ,_ಶ್ರೀವಿಜಯದಾಸರ ರಚನೆ,_

Jun 21, 2025

ಹರಿದಾಸರೊಡನಾಡು,  ಸುಳಾದಿ_ ,_ಶ್ರೀವಿಜಯದಾಸರ ರಚನೆ,_


ರಾಗ - ಭೈರವಿ : ತಾಳ - ಧೃವತಾಳ

*ಧೃವತಾಳ :*

*ಹರಿದಾಸರೊಡನಾಡು, ಹರಿಯಂಘ್ರಿ ಯುಗ್ಮನೋಡು*
*ಹರಿಯೆಂದು ಕೊಂಡಾಡು, ಹರಿನಾಮ ಹಾಡಿ ಪಾಡು*
*ಹರಿ ಪ್ರಸಾದವೆ ಬೇಡು, ಹರಿಸೇವೆಯನ್ನು ಮಾಡು*
*ಹರಿಗೆ ಕರವ ನೀಡು, ಹರಿಯ ಬಿಡದೆ ಕಾಡು*
*ಹರಿಯ ಪೊಗಳಿ ಪಾಡು, ಹರಿಗೆ ಮನಸು ಕೊಡು*
*ಹರಿಗೊಪ್ಪಿಸು ಈ ಬೀಡು, ಹರಿದ್ವೇಷಿಗಳ ಬಿಡು*
*ಹರಿಧ್ಯಾನದಲ್ಲಿ ಕೂಡು, ಹರಿಕರುಣದ ಜೋಡು -*
*ಹರಿಯದಂತೆ ತೊಡು, ಹರಿನಗರಿಗೆ ಓಡು*
*ಹರಿಯಲ್ಲಿ ರತಿ ಇಡು, ಹರಿಗೆ ಇಲ್ಲವೋ ಈಡು*
*ಹರಿವಿಜಯವಿಟ್ಠಲನ್ನ ಹರಿಯೆಂದರೆ ಈ ನಾಡು*
*ಹರುಷ ಬಡುವುದು ನೋಡು, ಹರಿದು ಪೋಗದೆ ಕೇಡು ll 1 ll

*ಮಟ್ಟತಾಳ :*

*ಹರಿಯ ಭಕುತಿ ಹರಿ ಬಲ್ಲವನೆಲ್ಲ*
*ಹರಿತಾ ಹತ್ತರೊಳಗೆ ಹರಿ ಹರಿದಾಡುವ*
*ಹರಿವಂತನು ಕಾಣೊ, ಹರಿ ದಿಕ್ಕುವ ಭವದ*
*ಹರಿಯೊಳಗಿಂದಲಿ ಹರಿದೆದ್ದು ಬಪ್ಪ, ಹರಿಗಂಡವನೆನ್ನು*
*ಹರಿವದನ ನಮ್ಮ ವಿಜಯವಿಟ್ಠಲ ನರ -*
*ಹರಿನಾಮವೆ ಪರಿಹರಿಸುವುದು ನರಕ ll 2 ll*

*ತ್ರಿವಿಡಿತಾಳ :*

*ಹರಿಯ ನಂಬಿರೊ ಜನರು ವೈರಾಗ್ಯಪರರಾಗಿ*
*ಹರಿದು ಪೋಗದೆ ನಿತ್ಯ ಪರರ ಒಡವಿಗೆ*
*ಹರಿ ಹನುಮಂತ ಒಂದೇ ಎಂದು ತಿಳಿದು*
*ಹರಿ ಇದ್ದಲ್ಲಿ ಪವಮಾನ ಇಪ್ಪನೆಂದು*
*ಹರಿಯ ಭಜಿಸಿ ಪವಮಾನನ್ನೆ ತೊರೆದರೆ*
*ಹರಿಪುರವಾಗದು ಶತಕಲ್ಪಕ್ಕೂ*
*ಹರಿಶರಣರ ಬಳಿವಿಡಿದು ಭಕುತಿಯಲ್ಲಿ*
*ಹರಿಶ್ರವಣವ ಕೇಳು ಶ್ರವಣದಲ್ಲಿ*
*ಹರಿತವಂದಿತ ನಮ್ಮ ವಿಜಯವಿಟ್ಠಲರೇಯ*
*ಹರಿ ಎಂದು ನುಡಿದರೆ ಹರಿದು ಬಪ್ಪನು ಕಾಣೋ ll 3 ll*

*ಅಟ್ಟತಾಳ :*

*ಹರಿಯ ಭಕುತಿ ಕಂಡವರಿಗೆ ದೊರಕುವದೆ ?*
*ಹರಿದೇರಿ ಪರ್ವತಾಗ್ರದಿಂದ ಭೂಮಿಗೆ*
*ಹರಿಯ ಬಿದ್ದರೆ ಇಲ್ಲ, ಸುತ್ತುವ ಸುಳಿಯೊಳು*
*ಹರಿದು ಮುಣುಗಿ ಎದ್ದು ಬಂದರೆ ಇಲ್ಲ*
*ಹರಿಯರೊಳಗೆ ನಿತ್ಯಹಗಲಿರುಳು ತಲೆ*
*ಹರಿ ಮಾಡಿಕೊಂಡು ನಭಕೆಪಾರಿದರಿಲ್ಲ*
*ಹರಿಭಕುತಿ ಕಂಡವರಿಗೆ ಸೂರೆ ?*
*ಹರಿಭಕುತಿ ಸಂಪಾದನೆ ಗಂಟೇ ?*
*ಹಾರಿಣಾಂಕಕುಲಪಾಲ ವಿಜಯವಿಟ್ಠಲನಂಘ್ರಿ*
*ಹರಿಯ ಬಲ್ಲವನಿಗೆ ಸುಲಭಸಾಧ್ಯವೆನ್ನಿ ll 4 ll*

*ಆದಿತಾಳ :*

*ಹರಿಯೆ ಪರಮಪುರುಷ, ಹರಿ ಪರಾತ್ಪರ ದೇವ*
*ಹರಿ ಚತುರನಾಶರಹಿತ, ಹರಿ ಅಚಿಂತ್ಯಾದ್ಭುತ*
*ಹರಿ ಅಪ್ರಾಕೃತಕಾಯ, ಹರಿ ಪ್ರಳಯವಿರಹಿತ*
*ಹರಿ ಮುಕ್ತಾಶ್ರಯ, ಹರಿ ಸರ್ವಾಂತರ್ಯಾಮಿ*
*ಹರಿ - ಜೀವ - ಜಡಕೆ ಭೇದ, ಹರಿ ಅನುಮಹಾರೂಪ*
*ಹರಿ ಕರ್ತಾ, ಜಗತ್ಕಾರಣ, ಹರಿರಮಾದಯಪ್ರೀಯ*
*ಹರಿ ವೈಕುಂಠ ರಮಣ, ವಿಜಯವಿಟ್ಠಲರೇಯ*
*ಹರಿ ತೋರುವನು ಭಕುತಿ ಕೈಕೊಂಡ ಮನುಜರಿಗೆ ll 5 ll*

*ಜತೆ : ಭಕುತಿಗೆ ಕೇಡಿಲ್ಲ ಅನಂತಕಾಲಕ್ಕೆ*
*ಭಕುತಿಪಡಿಯಿರೋ ವಿಜಯವಿಟ್ಠಲನಲ್ಲಿ ll - 

'ಭಕ್ತೈಕವಶ್ಯ ಪ್ರಭುಹು' ಅಂದಂತೆ ಶ್ರೀಹರಿಯಲ್ಲಿ, ಜ್ಞಾನಪೂರ್ವಕ ಮಾಡುವ ಭಕ್ತಿಗೆ ಮಾತ್ರ ವಶನಾಗುವ. ಅಂದರೆ ಅನುಗ್ರಹಿಸುವ. ಅದಕ್ಕೇ ದಾಸರು *'ಭಕುತಿ ಪಡಿಯಿರೋ ವಿಜಯವಿಟ್ಠಲನಲ್ಲಿ'* ಎಂದದ್ದು. ದಾಸರು ಈ ಸುಳಾದಿಯಲ್ಲಿ ತಿಳಿಸಿದ ಪ್ರತಿಪದ ವಾಕ್ಯವೂ ಅನಂತಾರ್ಥ ಗರ್ಭಿತವಾಗಿದೆ. ಇದರ ಅಧ್ಯಯನ ಅನುಷ್ಠಾನ - ಅನುಸಂಧಾನಗಳು ಸತ್ಸಾಧನೆಗೆ ಮಾರ್ಗದರ್ಶಕಗಳೂ ಎಂಬಲ್ಲಿ ಸ

ರಾಗ - : ತಾಳ - 

ಜೋಕುಮಾರನೆಂದು ಪಾಡಿದಳೊ
ಲೋಕಮೋಹಿಸುವಂಥ ಹೋಲಿಕೆಯವನ ಗೋಪಿ ll ಪ ll

ಬಾಯಲ್ಲಿ ಬೆಣ್ಣೆ ಬಗೆಬಗೆ ವೈಯ್ಯಾರ
ಕಾಯ ನೋಡಿದರದು ಬಲು ಕಪ್ಪು
ಮಾಯದ ವೇಶದವ ಮನೆ ಮನೆ ತಿರುಗುವ
ಸ್ತ್ರೀಯರ ಕಾಣುತ ಭಂಡಾಟನಾಡುವ ll 1 ll

ವಾವಿಗಳಿಲ್ಲದವಳ ತಾ ಮಾರಿ ಗಂಡು
ಆವಾಗ ಬಂದರಿವ ಇದೆ ತೆರನು
ದೇವದಾನವರೊಳಗಿವನೆ ಬಲು ಚಲುವ
ಕೇವಲ ನಾಚಿಕೆ ತೊರೆದ ಲಂಡನ್ನ ll 2 ll

ಅಷ್ಟಮಿ ದಿನದಲ್ಲಿ ಒಬ್ಬರ ವಶನಾಗಿ
ಬುಟ್ಟಿಯೊಳಗೆಯಿದ್ದು ಹೊರಗೆ ಪೋಪಾ
ಪಟ್ಟ ಗುಡುಪಾ ನಮ್ಮ ವಿಜಯವಿಟ್ಠಲರೇಯಾ
ಸೊಟ್ಟವಳನ ಬಿಡದಿಪ್ಪಕುವಲ್ಲಭಾht

tps://youtu.be/Tclv7N8LyAA?feature=shared
                      

ರಾಗ - : ತಾಳ -

ಕಾಮಹರ ಒಬ್ಬ ತಾನೆ ಬಲ್ಲಾ l
ರಾಮ ರಾಮ ಸೀತಾರಾಮ ರಾಮನಲ್ಲದಿಲ್ಲವೆಂದು ll ಪ ll

ಕೈಯಲಿ ಕಿನ್ನರಿ ಧರಿಸಿ ಸಿರಿಮೊಗದಿಂದ l
ಮೈಯಲಿ ದ್ವಾದಶ ಪುಂಡ್ರ ಧರಿಸಿ l
ಕೈಲಾಸಗಿರಿಯಲ್ಲಿ ಪಾರ್ವತಿ ಕೂಡ ಜಗ
ದಯ್ಯನಯ್ಯ ಜಗದೊಡಿಯ ರಾಮನಲ್ಲದಿಲ್ಲೆಂದು ll 1 ll

ಫಣಿಯಾಭರಣವು ಪೆಡೆಯೆತ್ತಿ ಇರಲು l
ಮಣಿ ಮಣಿ ರುಂಡಮಾಲೆ ತೂಗಾಡಲು l
ಕುಣಿದು ಕಣಕಾಲಿಂದ ಥಕ್ ಥಕ್ ಥೈ ರು
ಕ್ಮಿಣಿ ಪತಿ ಸರ್ವೋತ್ತಮ ರಾಮನಲ್ಲದಿಲ್ಲವೆಂದು ll 2 ll

ಕಾಳಕೂಟದ ವಿಷಬಿಂದು ಮಾತುರನುಂಗೆ l
ತಾಳಲಾರದೆ ತಳಮಳವಗೊಂಡು l
ಕಾಳಿಮರ್ದನ ಕಮಲಾಯತಾಕ್ಷ ಎನ್ನ l
ಪಾಲಿಸಿದ ಪರಮಾತ್ಮ ರಾಮನಲ್ಲದಿಲ್ಲವೆಂದು ll 3 ll

ಗಜಮುಖ ತಾಳವ ಪಿಡಿದು ತಥೈ ಎನ್ನೆ l
ಅಜಸುತ ರಿಪು ಮದ್ದಳಿಯೆ ಮುಟ್ಟಿ l
ಗಜ ಚರ್ಮಾಂಬರ ಗಾಯನವ ಮಾಡುತ-ತ್ರಿ
ಜಗಾಧಿಪತಿ l ವಿಷ್ಣು ರಾಮನಲ್ಲದಿಲ್ಲವೆಂದು ll 4 ll

ಆರು ಮುಖದವ ಶಂಖವನ್ನು ಊದೆ l
ಭೈರವ ನಾಗಸ್ವರವ ನುಡಿಸೆ l
ಚಾರು ಪ್ರಥಮ ಭೂತ ತಲೆ ಚಪ್ಪಳಿಡೇ l
ಧಾರಣಿಧರ ಸೀತಾರಾಮನಲ್ಲದಿಲ್ಲವೆಂದು ll 5 ll

ಗೋರಾಜ ಸರಿಗಮಪದನಿಸ ಎಂದು ನಲಿಯೇ l
ಉರಗಾದಿ ಮೂಷಕಾದಿ ಚಿಗಿದಾಡಲು l
ವಾರಣದ ಗಂಗೆ ಸಿರದಲಿ ತುಳುಕಲು l
ನಾರಾಯಣ ಪರದೈವ ರಾಮನಲ್ಲದಿಲ್ಲವೆಂದು ll 6 ll

ತುಂಬುರುನಾರಂದ ತಂದನ್ನತಾ ಎನ್ನೆ l
ಅಂಬರದಿಂದ ಪೂಮಳೆಗರೆಯೆ l
ಅಂಬುಜಪತಿ ಶಿರಿ ವಿಜಯವಿಟ್ಠಲ ವಿ
ಶ್ವಂಭರಜಾಂಡಕರ್ತು ರಾಮನಲ್ಲದಿಲ್ಲವೆಂದು

#ಶ್ರೀ #ವಿಜಯದಾಸರ #ಸುಳಾದಿ: #ಸತ್ಸಭೆಗೆ #ನೇಮಿಸುವೆ #ಮಾಸ #ನಿಯಾಮಕ #ತ್ರಿವಿಕ್ರಮಾಯ #ನಮಃ #ರಾಗ #ತಾಳ #ಕಾಮ #ವಿಸ್ತರ #ಮಹಿಮ

https://youtu.be/ej0IOhG7wDc?si=_V7E7F5XaV_UosdP

custom banner
pressmailtoday
Chethana Muniswamygo

Creator

ಹರಿದಾಸರೊಡನಾಡು, ಸುಳಾದಿ_ ,_ಶ್ರೀವಿಜಯದಾಸರ ರಚನೆ,_

Comments (0)

See all
Add a comment

Recommendation for you

  • What Makes a Monster

    Recommendation

    What Makes a Monster

    BL 76.3k likes

  • Arna (GL)

    Recommendation

    Arna (GL)

    Fantasy 5.5k likes

  • Blood Moon

    Recommendation

    Blood Moon

    BL 47.9k likes

  • Earthwitch (The Voidgod Ascendency Book 1)

    Recommendation

    Earthwitch (The Voidgod Ascendency Book 1)

    Fantasy 3k likes

  • The Last Story

    Recommendation

    The Last Story

    GL 46 likes

  • The Sum of our Parts

    Recommendation

    The Sum of our Parts

    BL 8.7k likes

  • feeling lucky

    Feeling lucky

    Random series you may like

ಸನಾತನ ಸಂಸ್ಕೃತಿ
ಸನಾತನ ಸಂಸ್ಕೃತಿ

473 views0 subscribers

*ಬ್ರಹ್ಮನು ಸೃಷ್ಟಿಯ ದೇವರ ಮತ್ತು ತ್ರಿಮೂರ್ತಿಗಳಲ್ಲಿ ಒಬ್ಬ*

ಬ್ರಹ್ಮ ನು ಸೃಷ್ಟಿಯ ದೇವರು (ದೇವ) ಮತ್ತು ತ್ರಿಮೂರ್ತಿಗಳಲ್ಲಿ ಒಬ್ಬ, ಉಳಿದವರು ವಿಷ್ಣು ಮತ್ತು ಶಿವ ದೇವರು.

ವೇದಾಂತ, ಪುರಾಣ , ತತ್ತ್ವಶಾಸ್ತ್ರದಲ್ಲಿ ಬ್ರಹ್ಮನ್ ಎಂದು ಕರೆಯಲ್ಪಡುವ ಪರಮಾತ್ಮನು ಅವನ ಪತ್ನಿ ಸರಸ್ವತಿ, ಈಕೆ ಕಲಿಕೆಯ ದೇವತೆ. ಬ್ರಹ್ಮನನ್ನು ಹೆಚ್ಚಾಗಿ ವೈದಿಕ ದೇವತೆಯಾದ ಪ್ರಜಾಪತಿಯೊಂದಿಗೆ ಹೆಚ್ಚಿನ ಸಂಬಂಧ ಹೊಂದಿದ್ದಾನೆ..
#bramma #brammanandam #saraswatichandra #saraswati #sharadmalhotra #sharada #hinduism #jainstatus #jainsong

ಸೃಷ್ಟಿಯ ಪ್ರಕ್ರಿಯೆಯ ಆರಂಭದಲ್ಲಿ, ಬ್ರಹ್ಮನು ಹನ್ನೊಂದು ಸೃಷ್ಟಿಸಿದ ಪ್ರಜಾಪತಿಗಳನ್ನು ಮಾನವ ಜನಾಂಗದ ಪಿತಾಮಹರು ಎಂದು ನಂಬಲಾಗಿದೆ. ಬ್ರಹ್ಮನು ಬ್ರಹ್ಮಾಂಡದ ಸೃಷ್ಟಿಕರ್ತ ಎಂದು ಕರೆಯಲಾಗುತ್ತದೆ.

ಈತ ತ್ರಿಮೂರ್ತಿಗಳ ಮೂಲಭೂತ ಸದಸ್ಯ, ಇದರಲ್ಲಿ ವಿಷ್ಣು, ಸಂರಕ್ಷಕ ಮತ್ತು ಶಿವ, ವಿನಾಶಕ ಕೂಡ ಸೇರಿದ್ದಾರೆ. ಒಟ್ಟಾಗಿ, ಈ ಮೂರು ದೇವತೆಗಳು ಕ್ರಮವಾಗಿ ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಕಾರ್ಯಗಳನ್ನು ಪ್ರತಿನಿಧಿಸುತ್ತವೆ,.

ಸೃಷ್ಟಿಕರ್ತನಾಗಿ ಬ್ರಹ್ಮನ ಪಾತ್ರವು ಭವ್ಯ ಯೋಜನೆಯಲ್ಲಿ ಅವನ ಮಹತ್ವವನ್ನು ಒತ್ತಿಹೇಳುತ್ತದೆ.
ಬ್ರಹ್ಮನ ದೈವಿಕ ವಾಹನ ಅಥವಾ ವಾಹನವು ಹಂಸ ಎಂದು ಕರೆಯಲ್ಪಡುವ ಪವಿತ್ರ ಹೆಬ್ಬಾತು. ದೇವರುಗಳು ಮತ್ತು ಮನುಷ್ಯರಿಗೆ ಮಾತ್ರವಲ್ಲದೆ ಅಸುರರು ಎಂದು ಕರೆಯಲ್ಪಡುವ ರಾಕ್ಷಸರಂತಹ ಜೀವಿಗಳಿಗೂ ಹಲವಾರು ಆಶೀರ್ವಾದಗಳನ್ನು ನೀಡುವ ಅಸಾಧಾರಣ ಸಾಮರ್ಥ್ಯವನ್ನು ಅವನು ಹೊಂದಿದ್ದಾನೆ. ಕುತೂಹಲಕಾರಿಯಾಗಿ, ರಾಕ್ಷಸರು ಸಹ ಅವನ ದೈವಿಕ ದೇಹದ ವಿವಿಧ ಭಾಗಗಳಿಂದ ಹುಟ್ಟಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ವಿವರಿಸಲು, ರಾಕ್ಷಸ ಜನಾಂಗವನ್ನು ಬ್ರಹ್ಮನ ಪಾದದಿಂದಲೇ ಅಸ್ತಿತ್ವಕ್ಕೆ ತರಲಾಗಿದೆ ಎಂದು ನಂಬಲಾಗಿದೆ.

ಮನುಸ್ಮೃತಿ ಗ್ರಂಥವು ಇವರನ್ನು ಮರಿಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತುಜ, ವಶಿಷ್ಠ, ಪ್ರಸೇತರು ಅಥವಾ ದಕ್ಷ, ಭೃಗು ಮತ್ತು ನಾರದರ ಜನಿಕರು ಎಂದು ಪಟ್ಟಿ ಮಾಡುತ್ತದೆ. ಬ್ರಹ್ಮಾಂಡವನ್ನು ಸೃಷ್ಟಿಸಲು ಅವನಿಗೆ ಸಹಾಯ ಮಾಡಲು ಅವನು ಏಳು ಮಹಾನ್ ಋಷಿಗಳನ್ನು ಅಥವಾ ಸಪ್ತಋಷಿಗಳನ್ನು ಸೃಷ್ಟಿಸಿದನು , ಅವನ ಈ ಎಲ್ಲಾ ಪುತ್ರರು ಬ್ರಹ್ಮನ ದೇಹದಿಂದಲ್ಲ, ಅವನ ಮನಸ್ಸಿನಿಂದ ಜನಿಸಿದ ಕಾರಣ, ಅವರನ್ನು ಮಾನಸ ಪುತ್ರರು ಎಂದು ಕರೆಯಲಾಗುತ್ತದೆ.

ಪುರಾಣಗಳ ಪ್ರಕಾರ, ಬ್ರಹ್ಮನು ಬ್ರಹ್ಮಾಂಡದ ಆರಂಭದಲ್ಲಿ ವಿಷ್ಣುವಿನ ನಾಭಿಯಿಂದ ಬೆಳೆದ ಕಮಲದ ಹೂವಿನಲ್ಲಿ (ತಾಯಿಯಿಲ್ಲದೆ) ಸ್ವಯಂ-ಜನನ ಮಾಡಿದ್ದಾನೆ. ಇದು ಅವನ ಹೆಸರನ್ನು ನಭಿಜ (ನಾಭಿಯಿಂದ ಜನಿಸಿದ) ಎಂದು ವಿವರಿಸುತ್ತದೆ. ನೀರಿನಲ್ಲಿ ಜನಿಸಿದ ಬ್ರಹ್ಮನನ್ನು ಕಂಜ (ನೀರಿನಲ್ಲಿ ಜನಿಸಿದ) ಎಂದೂ ಕರೆಯುತ್ತಾರೆ.

Subscribe

32 episodes

ಹರಿದಾಸರೊಡನಾಡು,  ಸುಳಾದಿ_ ,_ಶ್ರೀವಿಜಯದಾಸರ ರಚನೆ,_

ಹರಿದಾಸರೊಡನಾಡು, ಸುಳಾದಿ_ ,_ಶ್ರೀವಿಜಯದಾಸರ ರಚನೆ,_

19 views 0 likes 0 comments


Style
More
Like
List
Comment

Prev
Next

Full
Exit
0
0
Prev
Next