*ಶ್ರೀ ಭಗವಾನ್ ವಿಷ್ಣುವಿನ ಭಕ್ತಿ ಹೊಂದುವದು ಬಲು ಸುಲಭ:- -
೧)ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ, ಸರ್ವತಂತ್ರಸ್ವತಂತ್ರ, ಪುರುಷೋತ್ತಮ, ಸೃಷ್ಟ್ಯಾದಿ ಅಷ್ಟಕರ್ತ, ಜಗನ್ನಿಯಾಮಕಾದಿ ಅನಂತಗುಣಗಳಿಂದ ಮಂಡಿತನಾದ ಭಗವಂತ ಹೀಗಿರುವ, ಇಂತಹವನನ್ನು ಕಾಣಲು ಸಾಧ್ಯವೆ, ಸೇರಲು ಸುಲಭನೆ, ಹೊಂದಲಾಹುದೇ ಎಂದೆಲ್ಲಾ ಪ್ರಶ್ನೆಗಳು ಸಹಜ.
ಆದರೇ ಶಾಸ್ತ್ರಗಳು ಈ ಶ್ರೀಹರಿಯ ಬಗ್ಗೆ ಹೇಳುವುದು ಒಂದೇ ಮಾತು *'ಸುಲಭನೋ ಹರಿ'* ಎಂದು, *'ಶ್ರೀಹರಿ ಕರುಣಾಸಮುದ್ರ'*. ಸಕಲ ಶಾಸ್ತ್ರಗಳೂ ನಿರ್ಣಯಿಸಿದ ವಿಶೇಷ ಲಕ್ಷಣ ಇದಾಗಿದೆ. ಹರಿದಾಸರೂ ಇದನ್ನೇ ಸಾರಿ ಸಾರಿ ಹೇಳಿ ಪೊಗಳಿರುವರು.
ಜಗನ್ನಾಥದಾಸರು -
*ಪ್ರತಿದಿವಸ ತನ್ನಂಘ್ರಿಸೇವಾರತ ಮಹಾತ್ಮರು ಮಾಡುತಿಹ ಸಂ-*
*ಸ್ತುತಿಗೆ ವಶನಾಗುವನಿವನ ಕಾರುಣ್ಯಕೇನೆಂಬೆ ll* ಎಂದರು.
ಕಾರುಣ್ಯವೆಂಬ ವಿಶಿಷ್ಟವಾದ ಗುಣ ಭಗವದೈಕನಿಷ್ಠವಾದದ್ದು. ಅದಕ್ಕೆ ಶ್ರೀಮದಾಚಾರ್ಯರು ಅವನಲ್ಲಿ ಏನನ್ನೇ ಸಮರ್ಪಿಸಿದರೂ ಅದು ಅಕ್ಷಯವೆಂದರು.
*'ಅಕ್ಷಯಂ ಕರ್ಮ ಯಸ್ಮಿನ ಪರೇ
*'ಮರಳಿ ತನಗರ್ಪಿಸಲು ಕೊಟ್ಟದನಂತ ಮಡಿ ಮಾಡಿ'* ಎಂದರು.
*ಸುಲಭನೋ ಹರಿ ತನ್ನವರನರಘಳಿಗೆ ಬಿಟ್ಟಗಲನು ರಮಾಧವ-*
*ನೊಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ ll -ಶ್ರೀಜ.ದಾಸರು*
ಪುರಂದರರು ಹೇಳುವಾಗ - ಶ್ರೀಹರಿಯನ್ನು ಹೊಂದುವದು ಎಷ್ಟು ಸುಲಭವೆಂದರೆ -
*ಮಲಗಿ ಪಾಡಿದರೆ ಕುಳಿತು ಕೇಳುವನು*
*ಕುಳಿತು ಪಾಡಿದರೆ ನಿಂತು ಕೇಳುವನು*
*ನಿಂತು ಪಾಡಿದರೆ ನಲಿದು ಕೇಳುವನು*
*ನಲಿದು ಪಾಡಿದರೆ ಸ್ವರ್ಗ ಸೂರೆಬಿಟ್ಟೆ ಎಂಬ ಪುರಂದರವಿಟ್ಠಲ ll*
ಶ್ರೀಹರಿ ತನ್ನ ಭಕ್ತರು ಮಾಳ್ಪ ಅಪರಾಧಗಳನ್ನು ಸಹಿಸುವ, *'ಮನವನಿತ್ತರೆ ತನ್ನನೀವನು*' ಇದೆಂತಹ ಕಾರುಣ್ಯ. ಅದಕ್ಕೆ ಜಗನ್ನಾಥದಾಸರು -
*ಏನು ಕರುಣಾನಿಧಿಯೊ ಹರಿ
ಮತ್ತೇನು ಭಕ್ತಾಧೀನನೋ ಇನ್ನೇನು ಈತನಲೀಲೆ....* ಎಂದು ಬಣ್ಣಿಸಿದರು.
*ಏನು ಮಾಡುವ ಕರ್ಮ ನೀನೆ ಮಾಡಿಪೆ ಎಂಬ*
*ಜ್ಞಾನವೆ ಎನಗೆ ಜಿತವಾಗಿ l ಜಿತವಾಗಿ ಇರಲಿ ಮ -*
*ತ್ತೇನು ನಾನೊಲ್ಲೆ ನಿನ್ನಾಣೆ ll - ಶ್ರೀಜಗನ್ನಾಥದಾಸರು.*
ಹಿಂದೆ - ಇಂದು - ಮುಂದೂ ಉಸಿರಾಟದಿಂದಾರಂಭಿಸಿ ಏನೇಕರ್ಮವು ನನ್ನಿಂದ ಮಾಡಲ್ಪಟ್ಟದೆಂದರೆ ಅದು ನೀನೇ ಮಾಡಿ ಮಾಡಿಸಿರುವೆ.
*ದೀನ ಮಂದಾರ ಸಿರಿವಿಜಯವಿಟ್ಠಲರೇಯ l*
*ನೀನೇ ಮಾಳ್ಪವನೆಂಬ ಭಕ್ತರ ಕೈಬಿಡ ll - ಶ್ರೀವಿಜಯದಾಸರು*
ಹೀಗೆ ಎಲ್ಲವನ್ನು ಮಾಡಿ ಮಾಡಿಸುವವನು ಆ ಹರಿಯೇ
*ಹರಿಯೆ ನಿನ್ನಾಧೀನ ಮನ ಚಿತ್ತಾದಿಗಳು*
*ಹರಿಯೆ ನಿನ್ನಾಧೀನ ಸಕಲ ಚೇತನವು*
*ಹರಿಯೆ ನಿನ್ನಾಧೀನ ಸಕಲ ಚೇಷ್ಟೆಗಳು ll -ಶ್ರೀವಿಜಯದಾಸರು*
*ಕುಣಿಸಿದರೆ ಕುಣಿವೆ ನಗಿಸಿದರೆ ನಗುವೆ*
*ಮಣಿಸಿದರೆ ಮಣಿವೆ ಅಳಿಸಿದರೆ ಅಳುವೆ*
*ಉಣಿಸಿದರೆ ಉಣುವೆ ಉಡಿಸಿದರೆ ಉಡುವೆ*
*ಮನುವೇಷನೆ ಸಿರಿವಿಜಯವಿಟ್ಠಲ ನೀನೇ*
*ದಣಿಸಿದರೆ ದಣಿವೆ ನೆನೆವಿತ್ತರೆ ನೆನೆವೆ ll -ಶ್ರೀವಿಜಯದಾಸರು.*
2.ಜೀವಿಯ ಚಿಂತನೆಯು ಸದಾ ಶ್ರೀಹರಿಯೇ ಸರ್ವತಂತ್ರ ಸ್ವತಂತ್ರನೆಂದು, ಅನ್ಯರು ಸರ್ವಾತ್ಮನಾ ಅಸ್ವತಂತ್ರರೆಂದು *'ನಾಹಂ ಕರ್ತಾ ಹರಿ ಕರ್ತಾ'* ಎಂಬ ಅನುಸಂಧಾನದಿ ಪ್ರತಿ ಕ್ಷಣವೂ ಬುದ್ಧಿಯಲ್ಲಿ ಆರೂಢವಾಗುವಂತಾಗಿಸುವುದು.
*ಶ್ರೀದ ಹನುಮ ಭೀಮ ಮಧ್ವಾಂತರ್ಗತ l*
*ರಾಮ ಕೃಷ್ಣ ವೇದವ್ಯಾಸಾರ್ಪಿತವೆಂದು ll -ಶ್ರೀವೆಂಕಟವಿಟ್ಠಲರು*
*ಜ್ಞಾನ ಬಲ ಸುಖ ಪೂರ್ಣವ್ಯಾಪ್ತಗೆ*
*ಹೀನಗುಣ ನಂಬುವನು, ಈಶ್ವರ*
*ತಾನೆಂಬುವ ಸಚ್ಚಿದಾನಂದಾತ್ಮಗುತ್ಪತ್ತಿ l*
*ಶ್ರೀನಿತಂಬಿನಿಗೀಶಗೆ ವಿಯೋ-*
*ಗಾನುಚಿಂತನೆ ಛೇದಭೇದ ವಿ-*
*ಹೀನ ದೇಹಗೆ ಶಸ್ತ್ರಗಳ ಭಯ ಪೇಳುವವ ದೈತ್ಯ ll - ಹರಿಕಥಾಮೃತಸಾರ (30-2)*
.
#viral #trending # Breaking #news #Chethana #Muniswamygowda #Riya #YOGI
#http #www #facebook #com #share #reels #shorts #1millionview #ಚೇತನಾ #AI #whatsapp #status #duet #ಗೌಡ #peace #live #tv #video #sex
https://www.facebook.com/forpublics
forpublics

Comments (0)
See all