Please note that Tapas no longer supports Internet Explorer.
We recommend upgrading to the latest Microsoft Edge, Google Chrome, or Firefox.
Home
Comics
Novels
Community
Mature
More
Help Discord Forums Newsfeed Contact Merch Shop
Publish
Home
Comics
Novels
Community
Mature
More
Help Discord Forums Newsfeed Contact Merch Shop
__anonymous__
__anonymous__
0
  • Publish
  • Ink shop
  • Redeem code
  • Settings
  • Log out

ಸನಾತನ ಸಂಸ್ಕೃತಿ

Sri vijayadasa

Sri vijayadasa

Jun 17, 2025

ಶ್ರೀ ವಿಜಯದಾಸರ ಸುಳಾದಿ: ಸತ್ಸಭೆಗೆ ನಮಿಸುವೆ
ಶ್ರೀ ತ್ರಿವಿಕ್ರಮಾಯ ನಮಃ

ರಾಗ - : ತಾಳ -
ಶರಣು ಶರಣು ಸುರಾರಿ ಭಂಜನ
ಶರಣು ತ್ರಿಭುವನ ರಂಜನ
ಶರಣು ಸೇವಿತ ಸಕಲ ಮುನಿಜನ
ಶರಣು ರವಿಕುಲವರ್ಧನ ಶರಣು ll ಪ ll

ಹರಿಮುಕುಂದ ಮುರಾರಿ ಶ್ರೀಧರ ಆದಿಪುರುಷ ರಮಾವರ
ಪರಮಭಕ್ತ ಸರೋಜ ಭಾಸ್ಕರ ಪಾಹಿ ಪಾಹಿ ಕೃಪಾಕರ ll 1 ll

ತರುಣಿ ದ್ರೌಪದಿ ಮಾನ ರಕ್ಷಕ ದಾಸ ಜನ ಪರಿಪಾಲಕ
ದುರುಳ ದನುಜಾರಣ್ಯ ಪಾವಕ ದುರಿತಹರ ರಘುನಾಯಕ ll 2 ll

ಕೇಶವಾಚ್ಯುತ ಕೃಷ್ಣವಾಮನ ವಾಸುದೇವ ಜನಾರ್ದನ
ವಾಸವನುತ ವನಜಲೋಚನ ವಂದಿತಾಖಿಲ ಬುಧಜನ ll 3 ll

ಬ್ರಹ್ಮರುದ್ರೇಂದ್ರಾದಿ ಪೂಜಿತ ಬ್ರಹ್ಮಋಷಿಗಣ ಭಾವಿತ
ಬ್ರಹ್ಮಪಿತ ಪ್ರಹ್ಲಾದವರದ ನೃಸಿಂಹದೇವ ನಮೋಸ್ತುತೇ ll 4 ll

ಎನುತ ಭಜಿಸುವ ಭಕ್ತ ಜನರಿಗೆ ಮನದಭೀಷ್ಟವ ಪಾಲಿಪ
ಜನವರನೆ ಗುರುರಾಮವಿಟ್ಠಲ ಜಾನಕೀ ಪ್ರಾಣವಲ್ಲಭ ll 5 ll


ರಾಗ - : ತಾಳ -

ಅಂಗಳದೊಳು ರಾಮನಾಡಿದ ಚಂದ್ರ
ಬೇಕೆಂದು ತಾ ಹಠ ಮಾಡಿದ ॥ಪ॥

ತಾಯಿಯ ಕರೆದು ಕೈ ಮಾಡಿ ತೋರಿದ
ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ
ಚಿನ್ನಿಕೊಳು ಚಂಡು ಬುಗುರಿ ಎಲ್ಲವ
ಬೇಡ ಬೇಡ ಎಂದು ತಾ ಬಿಸಾಡಿದ ॥1॥

ಕಂದ ಬಾ ಎಂದು ತಾಯಿ ಕರೆದಳು ಮಮ್ಮು
ಉಣ್ಣೆಂದು ಬಣ್ಣಿಸುತ್ತಿದ್ದಳು
ತಾಯಿ ಕೌಸಲ್ಯ ಕಳವಳ ಗೊಂಡಳು ಕಂದ
ಅಂಜಿದನು ಎನ್ನುತಿದ್ದಳು ॥ 2 ॥

ಅಳುವ ಧ್ವನಿ ಕೇಳಿ ರಾಜನು ಮಂತ್ರಿ
ಸಹಿತಾಗಿ ಧಾವಿಸಿ ಬಂದನು
ನಿಲುವ ಕನ್ನಡಿ ತಂದಿರಿಸಿದ
ಶ್ರೀ ರಾಮನ ಎತ್ತಿ ಮುದ್ದಾಡಿದ ॥ 3॥

ಕನ್ನಡಿಯೊಳು ಬಿಂಬ ನೋಡಿದ ಚಂದ್ರ
ಸಿಕ್ಕಿದನೆಂದು ಕುಣಿದಾಡಿದ
ಈ ಸಂಭ್ರಮ ನೋಡಿ ಆದಿ ಕೇಶವ
ರಘು ವಂಶವನ್ನೇ ಕೊಂಡಾಡಿದ ॥ 4 ॥

ರಾಗ - : ತಾಳ -

ಉದ್ಧರಿಸೊ ಮಹಾರಾಯ ಮಧ್ವಾಂತರ್ಗತ l
ಉದ್ಧವ ಪ್ರಿಯ ll ಪ ll

ಬಿದ್ದಿಹೆ ಸಂಸಾರಾಬ್ಧಿಯೊಳಗೆ ತಾನೆದ್ದೆನೆಂದರೆ l
ಪದ್ಧತಿ ಕಾಣೆನ್ನುದ್ಧರಿಸೊ ಮಹರಾಯ ll 1 ll

ಇದ್ಧರಿಯೊಳಗೆ ಪುಟ್ಟಿದದಕಿನ್ನು ಮಧ್ವಶಾಸ್ತ್ರದಲಿ l
ಕೊಟ್ಟೆನ್ನುದ್ಧರಿಸೊ ಮಹರಾಯ ll 2 ll

ಕರ್ಮಕಾಲ ಫಲ ಊರ್ಮಿಯೊಳಗೆ ನಾ ನಿರ್ಮಲಕಾಣೆನೊ l
ಶರ್ಮವೆ ಕೊಟ್ಟೆನ್ನುದ್ಧರಿಸೊ ಮಹರಾಯ ll 3 ll

ಚಿನ್ನನ ಬಿನ್ನಪ ಮನಕೆ ತಂದು ಬನ್ನ ತರಿಪ ಪಥ l
ವನ್ನು ತೋರಿಸೆನ್ನನುದ್ಧರಿಸೊ ll 4 ll

ದಾಸನ ಬಿನ್ನಪ ಏಸು ಎನ್ನದೇ ತಂದೆವಾಸುದೇವ ಪೊರಿ l
ಈ ಸಮಯದಿ ಎನ್ನನುದ್ಧರಿಸೊ ll 5 ll


ರಾಗ - : ತಾಳ -

ನರಸಿಂಹ ನರಸಿಂಹ ನಮಿಸುವೆನೊ ಘೋರ
ದುರಿತ ಬೆನ್ನ ಬಿದ್ದಿದೆ ಪರಿಹರಿಸೊ ಶ್ರೀ ನರಸಿಂಹ ll ಪ ll

ಪರಮೇಷ್ಠಿ ಹರ ಸುರಪತಿ ಮುಖರಾ l
ಸುರನಿಕರ ಪೊರೆವ ಪ್ರಭೋ ಪ್ರವರ l
ದುರಿತವು ಅವರನ್ನ ಬಾಧಿಸದಂತೆ l
ಪೊರೆದ ಪರಿಯಿಂದ ಎನ್ನ ಪೊರೆಯೊ ll 1 ll

ಕಾಯ್ದು ತನ್ನಯ ತನ್ನ ತಂದೆಯ ಬಾಧೆ l
ಭಯದಿಂದ ಮನದಲ್ಲಿ ನಿನ್ನ ನೆನೆಯೆ l
ದಯದಿಂದ ನೀ ಕಂಭದಲಿ ಬಂದು ಪೊರೆದಂತೆ ಎನ್ನ l
ಭಯ ಪರಿಯೆ ಶ್ರೀ ನರಸಿಂಹ ll 2 ll

ನಿನ್ನ ಪೆಸರೆಂದರೆ ದುರಿತಂಗಳು l
ತನ್ನಿಂದ ತಾನೆ ಜರಿಯುವವು l
ಚನ್ನಾಗಿ ಶರಣರ ಪೊರೆದದಕೆ l
ನಿನ್ನವರೆಂದು ಕೇಳಿ ಬಲ್ಲೆ ಶ್ರೀ ನರಸಿಂಹ ll 3 ll

ನಖ ಮುಖ ಶಿಖಿ ತನ್ನ ನೆನಿಯೆ l
ಸುಖಿತರವಾಹೋದು ಶರಣರಿಗೆ l
ಮಖಭುಜ ರವಿ ಸಾಕ್ಷಿ ಇದಕಾಗಿದೆ ವಿಖನಸಾರ್ಚಿತಪಾದ l
ಸುಖಮಯನೆ ಶ್ರೀ ನರಸಿಂಹ ಕಾಯೊ ll 4 ll

ಅರಿದರೀಧರ ವರ ಕರಯುಗನೆ l
ಕರಯುಗ ಜಾನು ಶಿಖರದಲ್ಲಿಪ್ಪನೆ l
ಶಿರದಿಂದೊಪ್ಪುವ ಕರತಳನೆ l
ವರ ವಾಸುದೇವವಿಟ್ಠಲ ಪೊರೆಯೊ ಶ್ರೀ ನರಸಿಂಹ ಕಾಯೊ ll 5 ll


ರಾಗ - : ತಾಳ -

ಕರುಣಿಸು ನರಹರಿಯೇ ಸ್ಮರಣಿಯ
ಕರುಣಿಸು ನರಹರಿಯೇ ll ಪ ll

ಕರುಣಿಸುವದು ತವಸ್ಮರಣೆ ನಿರಂತರ
ಧರಣಿ ಸುರಪ್ರಿಯ ಚರಣಕೆರಗುವೆನು ll ಅ ಪ ll

ಶರಣರ ಸುರತರುವೇ ಕರುಣಾ
ಶರಧಿ ಶಿರಿಯಧೊರೆಯೆ
ಸರಸಿಜ ಭವಮುಖರರಸನೆ ತವಪದ
ಸರಸಿಜದಲಿ ಮನವಿರಿಸುವಂತೆ ಜವ ll 1 ll

ಕಂದನನುಡಿಕೇಳಿ ಸ್ತಂಭದಿ
ಬಂದೆಯೊ ವೇಗದಲಿ
ವಂದಿಸುವೆನು ಭವಬಂಧ ಬಿಡಿಸಿ ಮನ
ಮಂದಿರದಲಿ ತವ ಸಂದರುಶನವನು ll 2 ll

ಚಾರು ಕೃಷ್ಣ ತೀರಾಕಾರ್ಪರಾ
ಗಾರನೆ ಸ್ಮರಿಸುವರ
ಘೋರದುರಿತ ಹರನಾರಸಿಂಹ ನಿ
ನ್ನಾರಾಧಕರೊಳು ಸೇರಿ ಸುಖಿಸುವಂತೆ ll 3 ll

ನಿನ್ನವನೊ ನಿನ್ನವನೊ ನೀರಜಾಕ್ಷಾ l
ಅನ್ಯರಿಗೆ ಅಲ್ಪರಿಯೇ ಅನಿಮಿತ್ತ ಬಂಧೂ ll ಪ ll

ವಿಜಯರಾಯರ ಪಾದ ನಿಜವಾಗಿ ನೆರೆನಂಬಿ l
ಮೂಜ್ಜಗದೊಳಗೆ ಮುರಾರಿ ನಿನ್ನ l
ವ್ಯಾಜವಿಲ್ಲದ ರಾಜ ಪದವಿ ಸೇರಿಸುವ ಶಿರಿ l
ರಾಜಾಧಿರಾಜ ಹೇ ರಾಜಾನಂತನಿಭನೆ ll 1 ll

ಅರೆಮರೆಯಾಗೊಳದಂತೆ ಆಚರಿಪದೆ ಇಂದು l
ವರಿಸಿ ಬೇಡಿದೆ ವರವ ಪರಿಪರಿಯಲಿ l
ಪರಿಪೂರ್ಣ ಜ್ಞಾನಿಯೇ ಪರಸುಖವ ಪೂರ್ತಿಸುವ l
ಶರಣ ಜನ ಮನೋಹಾರ ಶ್ರೀ ಗುರುಗತ ಸ್ವಾಮೀ ll 2 ll

ಕೀರ್ತಿವಂತನೆ ಎನ್ನ ಮಾತು ಮನ್ನಿಸಬೇಕೋ l
ಆರ್ತಿ ಸಜ್ಜನರಿಗೆ ಬರಲು ವಳಿತೇ l
ಪಾರ್ಥಸಖ ವರ ಜನಾರ್ದನವಿಟ್ಠಲರೇಯಾ l
ಧಾರ್ತರಾಷ್ಟ್ರನ ವದದು ಧೈರ್ಯಶಾಲಿಯ ಮಾಡೋ ll 3 ll
                      

ರಾಗ - : ತಾಳ -

ರಘುರಾಮಗೆ ಬೆಳಗಿರೆ ಬೇಗ ಆರತಿ ll ಪ ll

ದಶರಥಪುತ್ರಗೆ ಪಶುಪತಿ ಮಿತ್ರಗೆ
ಋಷಿಗಳ್ಯಾಗವ ಕಾಯ್ದವಗೆ
ಶಶಿಮುಖಿ ಅಹಲ್ಯೆ ಶಾಪವ ಕಳೆದ
ಅತುಳ ಮಹಿಮ ಶ್ರೀಹರಿಗೆ ll 1 ll

ಶಿವನ ಧನುವ ಮುರಿದವನಿಜೆಯಳ ತಂದು
ಜವದಿ ಪರಶುರಾಮನಿಗೆ
ತವಕದಿ ಗರ್ವವ ಮುರಿದವನೀಶಗೆ
ಕಮಲಾಕ್ಷಿಯರೀಗ ಬೇಗ ll 2 ll

ಅನುಜನವಡಗೂಡಿ ವನಿತೆ ಸಹಿತಲೀ
ವನಕೆ ಪೊರಟು ಅಂಜನೆಯ
ತನುಜನಗೂಡಿ ದನುಜನ ಮುರಿದ
ಘನದ ಶ್ರೀ ಶ್ರೀನಿವಾಸಗೆ ll 3 ll


ರಾಗ - : ತಾಳ -

ಕಂಡೆ ಕಮಲನಾಭನ l ಕಣ್ಣಾರೆ l
ಪುಂಡರೀಕನ ಪಾಲನ l
ಪಂಢರಪುರ ವಾಸನ l
ಸಕಲ ಬೊಮ್ಮಾಂಡವ ಧರಿಸಿದನಾ ll ಪ ll

ಸುಲಭ ದೇವರ ದೇವ ನಾನಾ l ಪರಿ
ಮಳ ತುಳಸಿಗೆ ವಲಿವನ l
ಕಲಿಕಾಲ ಸಲಹುವನ l ಭವದ ಸಂ l
ಕಲೆ ಪರಿಹರಿಸುವನ ll 1 ll

ಲಿಂಗ ಸಂಗವನೀವನ l
ಜಗದಂತರಂಗ ಮೋಹನ ಕಾಯನ l
ಮಂಗಳ ದೇವೇಶನ l ಸಿರಿ ಪಾಂಡು l
ರಂಗ ನೆನೆಸಿಕೊಂಬನ ll 2 ll

ಜಗದಸ್ಮದ್ಭರಿತ ನಾನಾ l ವನದಿ
ಬಿಗಿದ ಪರಾಕ್ರಮನಾ l
ನಗವನೆತ್ತಿದ ಧೀರನಾ l ತನ್ನನು l
ಪೊಗಳಲು ಹಿಗ್ಗುವನಾ ll 3 ll

ಯಾದವ ಶಿರೋರನ್ನನ l ಕೊಳಲು
ಊದುವ ಚನ್ನಿಗನಾ l
ಆದಿ ಪರಮ ಪೂಂಸನ ಸರ್ವ l
ವೇದ ನಿಕರಮಯನಾ ll 4 ll

ಇಟ್ಟಿಗೆಯಲಿ ನಿಂದನ l ವರಂಗಳ
ಕೊಟ್ಟರೆ ತಪ್ಪದವನ l
ಅಟ್ಟಿ ಖಳನ ಕೊಂದನಾ l ವಿಜಯ l
ವಿಟ್ಠಲ ಜಗದೀಶನಾ ll 5 ll



ರಾಗ - : ತಾಳ -

ಬಡವರಾಧಾರಿ ಖಡು ದಯಾಸಾಗರ l
ದೃಢ ಶರಣರಾಪಾಲ ಒಡೆಯ ವೆಂಕಟರಾಯಾ ll ಪ ll

ಮಡದಿ ಮಕ್ಕಳು ಮನೆ ವಡವಿ ಧನ ಪಶುವರ್ಗ l
ಸಡಗರದಿ ನಿನ್ನ ಚರಣಕ ಅರ್ಪಿಸಿ ll
ನಡತಿವಂತರ ಸುಸಂಗಡದಿ ಲೋಲ್ಯಾಡಿ l
ಮೃಡಸಖನೆ ಮುಖ್ಯ ನಾಮಾಮೃತದ ಪಡಿ ಬಯಪ ll 1 ll

ಗುರುಪಾದ ನಿಷ್ಠಿಯಲಿ ಸರಿಯದಲೆ ಇರಳ್ಹಗಲು l
ಅರಮರಿಯ ಮಾಡದಲೆ ಧರಿಯ ಮ್ಯಾಲೆ l
ಇರತಕ್ಕಾ ಜನಕ ನಿನ್ನಿರವ ತೋರಿ ಪೊರವ l
ಪರಮ ಕರುಣಾಂಬುಧೆ ಪರಿಚಾರಿಕ ಬಂದ ll 2 ll

ಕಂದ ನಾನು ನುಡಿ ಕೇಳೋ ಕಮನೀಯ ಮೂರುತಿ l
ಮುಂದರಿಯದ ಜ್ಞಾನಿ ಮಂದಿಗಳಾರಾ l
ಹೊಂದಿಟ್ಟು ರಕ್ಷಿಸೊ ಬಿಂದುಮಾಧವ ಯನ್ನ l
ತಂದೆ ಜನಾರ್ದನವಿಟ್ಠಲ ಸಂದರುಶನಕ ಬಂದ ll 3 ll

ರಾಗ - : ತಾಳ -

ಹರಿಹರಿ ದಯವಾಗೊ ರಮಾಧವ ಶ್ರೀ l
ಹರಿ ದಯವಾಗೊ ಭವ l
ಶರಧಿಯೊಳ್ಪರಿಪರಿ ನೊಂದೆ l
ಪಾರಗೈಸೊ ಪಾರಾಶರ ಸುತನೆ ll ಪ ll

ರಾಮಕೃಷ್ಣ ವ್ಯಾಸಾ ನಿಮ್ಮ ನಾಮ ಭಜಕ ದಾಸಾ l
ಕಾಮಿತ ಫಲಲೇಶಾ ಕೊಡದೆ ಕಾಡುವಿ ಸರ್ವೇಶಾ l
ಪ್ರೇಮವೇನೊ ಸುಖಧಾಮ ನೀನೀ ಪರಿ l
ಪಾಮರಿಂದ್ಯೆನ್ನ ಪಳಿಸುವಿ ದೇವಾ ll 1 ll

ಅಲ್ಲು ನೀನೆ ಇರುವಿ ಯನ್ನಲ್ಲಿದ್ದು ಯಾಕೆ ಮರೆವಿ l
ಬಲ್ಲಿದ ನೆನಿಸುವಿ ಕ್ಷುಲ್ಲಕರಿಂದಲಿ ದಣಿಸುವಿ l
ಸಲ್ಲುವದೆ ನಿನಗಿದೆ ಉಚಿತಾದರೆ l
ಕೊಲ್ಲೊ ಬ್ಯಾಗ ಮಾವಲ್ಲಭ ಮೂರ್ತಿ ll 2 ll

ನಾನು ಯಂಬೊ ಸೊಲ್ಲಾ ತನ್ನ ಕಾಣದೆ ಬಿಡದಲ್ಲಾ l
ಮನದಾಸೆಗೆ ಮಿತಿಯಿಲ್ಲಾ ನೀನರಿಯದ ಮಾತಿದರೊಳಿಲ್ಲಾ l
ಯೇನು ಹೇಳಲೊ ಯನ್ನ ಭವಣಿಯು l
ಮೀನ ಮರಿಯಂತ ಮರಗುವೆ ನಲ್ಲೊ ll 3 ll

ಕರುಣ ಬರದೆ ನಿನಗೆ ಈ ಹರಣಕ ಸುಖ ಲೇಶವಿಲ್ಲ ಈಗ l
ಮರಣವೆ ಸುಖಯನಗೆ ಕರಿಕರಿ ಭವ ತೊಲಗಿಸು ಬ್ಯಾಗ l
ಚರಣಕ್ಕೆರಗುವೆನೊ ಸಿರಿವರ ಶ್ರೀ ಹರಿ l
ಬರದೆ ತಡಿಯದಿರು ಭಕ್ತರ ಧೊರಿಯೆ ll 4 ll

ಎಷ್ಟು ಹೇಳಲಯ್ಯಾ ಈ ಕಷ್ಟವ ನೀಬಂದು ಬಿಡಿಸೊ ಜೀಯ್ಯಾ l
ಕೃಷ್ಣವಿಟ್ಠಲರಾಯಾ ಇಷ್ಟರೊಳ್ಸಂತುಷ್ಟನಾಗಿ ಕೈಯಾ l
ಘಟ್ಯಾಗ್ಹಿಡಿದರ ಬಿಟ್ಹೋಯಿತು ಶ್ರಮ l
ಬಟ್ಟದ್ದೆಲ್ಲ ಸಾರ್ಥಕಯಿಂದಿಗೆ ll 5 ll

#Gini #Ginitha #GinithaS #Mookambika #Ambika #Shivaraj #Sheshadri #puram ##ಶ್ರೀ #ವಿಜಯದಾಸರ #ಸುಳಾದಿ: #ಸತ್ಸಭೆಗೆ #ನೇಮಿಸುವೆ #ಮಾಸ #ನಿಯಾಮಕ  #ತ್ರಿವಿಕ್ರಮಾಯ #ನಮಃ #ರಾಗ #ತಾಳ


https://youtu.be/YeM46-NHxHA?si=h_ckdHibpppfNgDM

custom banner
pressmailtoday
Chethana Muniswamygo

Creator

Sri vijayadasa

#ganesh

Comments (0)

See all
Add a comment

Recommendation for you

  • What Makes a Monster

    Recommendation

    What Makes a Monster

    BL 76.3k likes

  • Arna (GL)

    Recommendation

    Arna (GL)

    Fantasy 5.5k likes

  • Blood Moon

    Recommendation

    Blood Moon

    BL 47.9k likes

  • Earthwitch (The Voidgod Ascendency Book 1)

    Recommendation

    Earthwitch (The Voidgod Ascendency Book 1)

    Fantasy 3k likes

  • The Last Story

    Recommendation

    The Last Story

    GL 46 likes

  • The Sum of our Parts

    Recommendation

    The Sum of our Parts

    BL 8.7k likes

  • feeling lucky

    Feeling lucky

    Random series you may like

ಸನಾತನ ಸಂಸ್ಕೃತಿ
ಸನಾತನ ಸಂಸ್ಕೃತಿ

481 views0 subscribers

*ಬ್ರಹ್ಮನು ಸೃಷ್ಟಿಯ ದೇವರ ಮತ್ತು ತ್ರಿಮೂರ್ತಿಗಳಲ್ಲಿ ಒಬ್ಬ*

ಬ್ರಹ್ಮ ನು ಸೃಷ್ಟಿಯ ದೇವರು (ದೇವ) ಮತ್ತು ತ್ರಿಮೂರ್ತಿಗಳಲ್ಲಿ ಒಬ್ಬ, ಉಳಿದವರು ವಿಷ್ಣು ಮತ್ತು ಶಿವ ದೇವರು.

ವೇದಾಂತ, ಪುರಾಣ , ತತ್ತ್ವಶಾಸ್ತ್ರದಲ್ಲಿ ಬ್ರಹ್ಮನ್ ಎಂದು ಕರೆಯಲ್ಪಡುವ ಪರಮಾತ್ಮನು ಅವನ ಪತ್ನಿ ಸರಸ್ವತಿ, ಈಕೆ ಕಲಿಕೆಯ ದೇವತೆ. ಬ್ರಹ್ಮನನ್ನು ಹೆಚ್ಚಾಗಿ ವೈದಿಕ ದೇವತೆಯಾದ ಪ್ರಜಾಪತಿಯೊಂದಿಗೆ ಹೆಚ್ಚಿನ ಸಂಬಂಧ ಹೊಂದಿದ್ದಾನೆ..
#bramma #brammanandam #saraswatichandra #saraswati #sharadmalhotra #sharada #hinduism #jainstatus #jainsong

ಸೃಷ್ಟಿಯ ಪ್ರಕ್ರಿಯೆಯ ಆರಂಭದಲ್ಲಿ, ಬ್ರಹ್ಮನು ಹನ್ನೊಂದು ಸೃಷ್ಟಿಸಿದ ಪ್ರಜಾಪತಿಗಳನ್ನು ಮಾನವ ಜನಾಂಗದ ಪಿತಾಮಹರು ಎಂದು ನಂಬಲಾಗಿದೆ. ಬ್ರಹ್ಮನು ಬ್ರಹ್ಮಾಂಡದ ಸೃಷ್ಟಿಕರ್ತ ಎಂದು ಕರೆಯಲಾಗುತ್ತದೆ.

ಈತ ತ್ರಿಮೂರ್ತಿಗಳ ಮೂಲಭೂತ ಸದಸ್ಯ, ಇದರಲ್ಲಿ ವಿಷ್ಣು, ಸಂರಕ್ಷಕ ಮತ್ತು ಶಿವ, ವಿನಾಶಕ ಕೂಡ ಸೇರಿದ್ದಾರೆ. ಒಟ್ಟಾಗಿ, ಈ ಮೂರು ದೇವತೆಗಳು ಕ್ರಮವಾಗಿ ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಕಾರ್ಯಗಳನ್ನು ಪ್ರತಿನಿಧಿಸುತ್ತವೆ,.

ಸೃಷ್ಟಿಕರ್ತನಾಗಿ ಬ್ರಹ್ಮನ ಪಾತ್ರವು ಭವ್ಯ ಯೋಜನೆಯಲ್ಲಿ ಅವನ ಮಹತ್ವವನ್ನು ಒತ್ತಿಹೇಳುತ್ತದೆ.
ಬ್ರಹ್ಮನ ದೈವಿಕ ವಾಹನ ಅಥವಾ ವಾಹನವು ಹಂಸ ಎಂದು ಕರೆಯಲ್ಪಡುವ ಪವಿತ್ರ ಹೆಬ್ಬಾತು. ದೇವರುಗಳು ಮತ್ತು ಮನುಷ್ಯರಿಗೆ ಮಾತ್ರವಲ್ಲದೆ ಅಸುರರು ಎಂದು ಕರೆಯಲ್ಪಡುವ ರಾಕ್ಷಸರಂತಹ ಜೀವಿಗಳಿಗೂ ಹಲವಾರು ಆಶೀರ್ವಾದಗಳನ್ನು ನೀಡುವ ಅಸಾಧಾರಣ ಸಾಮರ್ಥ್ಯವನ್ನು ಅವನು ಹೊಂದಿದ್ದಾನೆ. ಕುತೂಹಲಕಾರಿಯಾಗಿ, ರಾಕ್ಷಸರು ಸಹ ಅವನ ದೈವಿಕ ದೇಹದ ವಿವಿಧ ಭಾಗಗಳಿಂದ ಹುಟ್ಟಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ವಿವರಿಸಲು, ರಾಕ್ಷಸ ಜನಾಂಗವನ್ನು ಬ್ರಹ್ಮನ ಪಾದದಿಂದಲೇ ಅಸ್ತಿತ್ವಕ್ಕೆ ತರಲಾಗಿದೆ ಎಂದು ನಂಬಲಾಗಿದೆ.

ಮನುಸ್ಮೃತಿ ಗ್ರಂಥವು ಇವರನ್ನು ಮರಿಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತುಜ, ವಶಿಷ್ಠ, ಪ್ರಸೇತರು ಅಥವಾ ದಕ್ಷ, ಭೃಗು ಮತ್ತು ನಾರದರ ಜನಿಕರು ಎಂದು ಪಟ್ಟಿ ಮಾಡುತ್ತದೆ. ಬ್ರಹ್ಮಾಂಡವನ್ನು ಸೃಷ್ಟಿಸಲು ಅವನಿಗೆ ಸಹಾಯ ಮಾಡಲು ಅವನು ಏಳು ಮಹಾನ್ ಋಷಿಗಳನ್ನು ಅಥವಾ ಸಪ್ತಋಷಿಗಳನ್ನು ಸೃಷ್ಟಿಸಿದನು , ಅವನ ಈ ಎಲ್ಲಾ ಪುತ್ರರು ಬ್ರಹ್ಮನ ದೇಹದಿಂದಲ್ಲ, ಅವನ ಮನಸ್ಸಿನಿಂದ ಜನಿಸಿದ ಕಾರಣ, ಅವರನ್ನು ಮಾನಸ ಪುತ್ರರು ಎಂದು ಕರೆಯಲಾಗುತ್ತದೆ.

ಪುರಾಣಗಳ ಪ್ರಕಾರ, ಬ್ರಹ್ಮನು ಬ್ರಹ್ಮಾಂಡದ ಆರಂಭದಲ್ಲಿ ವಿಷ್ಣುವಿನ ನಾಭಿಯಿಂದ ಬೆಳೆದ ಕಮಲದ ಹೂವಿನಲ್ಲಿ (ತಾಯಿಯಿಲ್ಲದೆ) ಸ್ವಯಂ-ಜನನ ಮಾಡಿದ್ದಾನೆ. ಇದು ಅವನ ಹೆಸರನ್ನು ನಭಿಜ (ನಾಭಿಯಿಂದ ಜನಿಸಿದ) ಎಂದು ವಿವರಿಸುತ್ತದೆ. ನೀರಿನಲ್ಲಿ ಜನಿಸಿದ ಬ್ರಹ್ಮನನ್ನು ಕಂಜ (ನೀರಿನಲ್ಲಿ ಜನಿಸಿದ) ಎಂದೂ ಕರೆಯುತ್ತಾರೆ.

Subscribe

32 episodes

Sri vijayadasa

Sri vijayadasa

21 views 0 likes 0 comments


Style
More
Like
List
Comment

Prev
Next

Full
Exit
0
0
Prev
Next