Please note that Tapas no longer supports Internet Explorer.
We recommend upgrading to the latest Microsoft Edge, Google Chrome, or Firefox.
Home
Comics
Novels
Community
Mature
More
Help Discord Forums Newsfeed Contact Merch Shop
Publish
Home
Comics
Novels
Community
Mature
More
Help Discord Forums Newsfeed Contact Merch Shop
__anonymous__
__anonymous__
0
  • Publish
  • Ink shop
  • Redeem code
  • Settings
  • Log out

ಸನಾತನ ಸಂಸ್ಕೃತಿ

*ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋ _,_ _ಶ್ರೀಕೃಷ್ಣ ಮಹಿಮಾ ಸುಳಾದಿ_ ,_ಶ್ರೀವಿಜಯದಾಸರ ರಚನೆ

*ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋ _,_ _ಶ್ರೀಕೃಷ್ಣ ಮಹಿಮಾ ಸುಳಾದಿ_ ,_ಶ್ರೀವಿಜಯದಾಸರ ರಚನೆ

Jun 26, 2025

 *ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋ _,_ _ಶ್ರೀಕೃಷ್ಣ ಮಹಿಮಾ ಸುಳಾದಿ_ ,_ಶ್ರೀವಿಜಯದಾಸರ ರಚನೆ*

ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋ _,_ _ಶ್ರೀಕೃಷ್ಣ ಮಹಿಮಾ ಸುಳಾದಿ_ ,_ಶ್ರೀವಿಜಯದಾಸರ ರಚನೆ, ರಾಗ ವರಾಳಿ

ದಾಸರೆಂದರೆ ಪುರಂದರ ಕುರಿತು ಕೆಲ ವಿಷಯಗಳು:-

ಎಲ್ಲವನ್ನೂ ತೊರೆದು ಕಾಲಿಗೆ ಗೆಜ್ಜೆ ಕಟ್ಟಿ ಕೈಯಲಿ ತಂಬೂರಿ ಹಿಡಿದು ಜೋಳಿಗೆ ಏರಿಸಿಕೊಂಡು ಭಗವಂತನ ಸೇವೆಗೆ ಹೊರಟೇಬಿಡುತ್ತಾರೆ. ಈ ದಾಸರು,

ಶ್ರೀ ಪುರಂದರ ದಾಸರು. ಅದನ್ನೇ ತಮ್ಮ ಒಂದು ಹಾಡಿನಲ್ಲಿ

ಗುರುವಿನ ಗುಲಾಮನಾಗೋ ತನಕ ದೊರೆಯದಣ್ಣ ಮುಕುತಿ ಪರಪರಿ ಅನೇಕ ಶಾಸ್ತ್ರಗಳೋದಿ ವ್ಯರ್ಥವಾಯ್ತು ಭಕುತಿ  ಎನ್ನುತ್ತಾರೆ.  ಗುರುಗಳ ಉಪದೇಶ ಮಾರ್ಗದರ್ಶನ ಪಡೆದು ಸನ್ಮಾರ್ಗದಲ್ಲಿ ನಡೆದು ಸತ್ಸಾಧನೆ ಮಾಡಿರಿ ಎಂದು ನಮಗೆ ಗುರುವಾಗಿ ದಾರಿ ತೋರಿಸಿದ್ದಾರೆ ಶ್ರೀ ದಾಸಾರ್ಯರು.

*ದಾಸರೆಂದರೆ ಪುರಂದರದಾಸರೆಂದೆನಿಸುತ್ತ* = ' ದಾಸರೆಂದರೆ ಪುರಂದರದಾಸರಯ್ಯ ' ಎಂಬ ಶ್ರೀಚಂದ್ರಿಕಾಚಾರ್ಯರ ಉಕ್ತಿಯ ಅನುವಾದ ;

*ಹೀನದೈವವೆ* = ಅವೈಷ್ಣವ ದೇವತೆಗಳನ್ನು ;

*ಜವನ ದೂತರಿಗೆ* = ಯಮನ ದೂತರಿಗೆ ;

*ಪರಾಭವ ಮಾಡಿ ದೂರಿರಿಸಿ* = ಕಳೆದು - ತಮ್ಮಲ್ಲಿ ಪರಿಣಾಮವಿಲ್ಲದಂತೆ ಮಾಡಿ ;

*ಕವಿಗಳ ಮನದ ತಾಪವನು ಪರಿಹರಿಸಿ* = ತಮ್ಮನ್ನು ಅನುಸರಿಸಿದ ಜ್ಞಾನಿಗಳ ತ್ರಿವಿಧ ತಾಪ ಪರಿಹರಿಸಿ ;

"ಕಾಲಿಗೆ ಗೆಜ್ಜೆ ಕಟ್ಟಿ ನೀಲವರ್ಣನ ಗುಣ ಆಲಾಪಿಸುತ ಬಲು ಓಲಗ ಮಾಡುವಂತ

ಮಧುಕರವೃತ್ತಿ ಎನ್ನದು ಬಲು ಚನ್ನದು,ಮಧುಕರ ವೃತ್ತಿ ಎನ್ನದು "

ದಾಸರೆಂದರೆ ಪುರಂದರ ದಾಸರಯ್ಯ ಎಂದು ತಮ್ಮ ಗುರುಗಳಾದ ಶ್ರೀ ವ್ಯಾಸರಾಜರಿಂದಲೇ ಪ್ರಶಂಸನೆಗೊಳಗಾದಂತಹ ಮಹಾನುಭಾವರು ಇವರು.ಇವರು ರಚಿಸಿದ ಕೃತಿಗಳು ಉಪನಿಷತ್ ಗಳಂತೆಯೇ ಶ್ರೇಷ್ಠ ವೆಂದು ಅವುಗಳನ್ನು ಪುರಂದರೋಪನಿಷತ್ ಎಂದು ಕರೆದು ಪೂಜಾರ್ಹವೆಂದು ಪೂಜಾಪೀಠದಲ್ಲಿ ಇಟ್ಟರು ಶ್ರೀ ವ್ಯಾಸರಾಜರು.

ಬಿನ್ನಹಕೆ ಬಾಯಿಲ್ಲವಯ್ಯಾ ।

ಅನಂತ ಅಪರಾಧ ಎನ್ನಲ್ಲಿ ಇರಲಾಗಿ

ಎನ್ನುವ ದಾಸರು ತಮ್ಮ ಅಪರಾಧಗಳು ಎಷ್ಟಿವೆ ಎಂದರೆ ಅರಿಷಡ್ವೈರಿಗಳ ಅಂದರೆ ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳ ದಾಸರಾಗಿ, ಮಾಡಿದಂತಹ ಅಪಾರವಾದ ತಪ್ಪುಗಳನ್ನು ಭಗವಂತನಲ್ಲಿ ಹೇಳಲೂ ಬಾಯಿಬರುವುದಿಲ್ಲ ಅಷ್ಟು ಅಪರಾಧಗಳನ್ನು ಮಾಡಿಬಿಟ್ಟಿದ್ದೇನೆ ಎನ್ನುತ್ತಾರೆ.


ಸತಿ ಮೋಹ ಸುತ ಮೋಹ ಜನನಿ ,ಜನಕರ ಮೋಹ ,ರಸಿಕ ಮಿತ್ರರ ಮೋಹ ರಾಜ ಮೋಹ

ಪಶು ಮೋಹ ಭೂ ಮೋಹ ಬಂಧುವರ್ಗದ ಮೋಹ
ಅಸುರಾರಿ ನಿನ್ನ ಮರೆತೆನೋ ಕಾಯೋ ಹರಿಯೇ,

ಎಂದು

ಪತ್ನಿ, ಮಕ್ಕಳು, ತಂದೆ ತಾಯಿ ಸ್ನೇಹಿತರು ಬಂದುಬಳಗ,ಆಸ್ತಿ ಧನಕನಕ ಹೀಗೆ ತಮ್ಮ ಲೌಕಿಕದ ಸುಖದಲ್ಲಿದ್ದ ಮೋಹವನ್ನು ಹೇಳುತ್ತ ..

ಅನ್ನ ಮದ ಅರ್ಥಮದ ಅಖಿಳವೈಭವದ ಮದ
ಮುನ್ನ ಪ್ರಾಯದ ಮದ ರೂಪಮದವು
ತನ್ನ ಶಕ್ತಿಯ ಮದ ಶತ್ರುವಶನಾದ ಮದ

ಇನ್ನು ತನಗೆದುರಾರು ಇಲ್ಲೆಂಬ ಮದದಿಂದ ಅಸುರಾರಿ ನಿನ್ನ ಮರೆತೆನೋ ಕಾಯೋ ಹರಿಯೇ ..

ದಾಸರು ಮತ್ತೂ ಮುಂದುವರಿಸುತ್ತ ಹೇಳ್ತಾರೆ.

ಇಷ್ಟು ದೊರಕಿದರೆ ಅಷ್ಟು ಬೇಕಂಬಾಸೆ ।
ಅಷ್ಟು ದೊರಕಿದರೆ ಮತ್ತಷ್ಟರಾಸೆ ।

ಕಷ್ಟ ಬೇಡಂಬಾಸೆ ಕಡು ಸುಖವ ಕಾಂಬಾಸೆ ।
ನಷ್ಟ ಜೀವನದಾಸೆ ಪುರಂದರವಿಠ್ಠಲ ।।

ನಮಗೆ ದೊರಕಿದ್ದರಲ್ಲಿ ಭಗವಂತ ನಮಗೆ ಕೊಟ್ಟಿದ್ದರಲ್ಲಿ ತೃಪ್ತಿ ಇಲ್ಲ ನಮಗೆ,ಎಷ್ಟು ದೊರಕಿದರೂ ಇನ್ನೂ ಬೇಕು ಮತ್ತೂ ಬೇಕು ಎಂದು ಬೇಕುಗಳ ಪಟ್ಟಿಯೇ ಬೆಳೆಯುತ್ತದೆ.ಮನುಷ್ಯನಿಗೆ ತೃಪ್ತಿ ಎಂಬುದೇ ಇಲ್ಲ ಎಂಬುದನ್ನು ದಾಸರು ಇಲ್ಲಿ ಮನ ಮುಟ್ಟುವಂತೆ ಹೇಳುತ್ತಾರೆ.

ಶ್ರೀ ಪುರಂದರ ದಾಸರು ಈ ಹಾಡಿನಲ್ಲಿ ಎಲ್ಲವೂ ತಾವು ಮಾಡಿದ ತಮ್ಮ ತಪ್ಪು ಗಳೆಂದು ಹೇಳಿಕೊಂಡರೂ ಸಹ ಇದು ಪ್ರತಿಯೊಬ್ಬ ಮಾನವ ಜೀವಿ ಮಾಡುವ ತಪ್ಪೇ ಆಗಿದೆ.

ದಾಸನ ಮಾಡಿಕೊ ಎನ್ನ ,ಸ್ವಾಮಿ ಸಾಸಿರ ನಾಮದ ವೆಂಕಟರಮಣ

ಮೊರೆ ಹೊಕ್ಕವರ ಕಾಯ್ವ ಬಿರುದು,
ಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದು,
ದುರಿತ ರಾಶಿಗಳೆಲ್ಲ ತರಿದು
ಸಿರಿ ಪುರಂದರ ವಿಠ್ಠಲನೆ ಎನ್ನ ನೀ ಪೊರೆದು,
ಎಂದು ದೀನರಾಗಿ‌ಭಗವಂತ ನಿನ್ನ ದಾಸ್ಯವನ್ನು ನಿನ್ನ ಸೇವಾಭಾಗ್ಯವನ್ನು ಸದಾ ಕೊಡು ಎಂದು ದೀನರಾಗಿ ಭಗವಂತನಲ್ಲಿ ಮೊರೆಯಿಡುತ್ತಾರೆ ಶ್ರೀ ದಾಸರು.

ಈ ಮೂಲಕ ನಾವು ಸಹ ಭಗವಂತನಲ್ಲಿ ಹೇಗೆ ಬೇಡಿಕೊಳ್ಳಬೇಕು,ಏನನ್ನು ಬೇಡಿಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಶ್ರೀ ಪುರಂದರ ದಾಸರು.




ರಾಗ - ಉದಯರಾಗ : ತಾಳ -


ಈ ಕೃಷ್ಣರಾಯನ ನೋಡುವ ಸುಖವೆ ಸಾಕು l

ಪ್ರಾಕೃತಾರಹಿತ ಶರೀರ ವುಡುಪಿಯಾ ll ಪ ll


ಸಾಲ್ಬೆರಳು ಚರಣ ಜಂಘೆ ಜಾನುಕದಳಿಯ l

ಪೋಲ್ವದೊಡೆ ಮದನ ಮುದ್ರಿಕೆ ನಾಭಿ ಕಟಿ ಬಗಲು l

ಸಾಲತ್ರಿವಳಿ ವುದರ ವತ್ಸ ಸುಂದರ ಕಂಠ l

ಹಾಲಗಲ್ಲದ ಪೋಲುವ ಬಾಲ ಚನ್ನಿಗನಾ ll 1 ll


ತರುಣಾಬ್ಜ ಕರತಳಂಗುಲಿವುಗುರು ಮಣಿಬಂದ l

ಕರಿತೊಂಡ ತೋಳು ಭುಜ ವದನ ದಂತಪಂಗ್ತಿ l

ಮರಿದುಂಬೆ ಗುರುಳು ನಾಶಿಕ ಕರ್ಣನೇತ್ರ ಪಣಿ l

ಶರಪುಬ್ಬು ಮಸ್ತಕದ ಸೊಬಗು ಮಿಂಚಿನ ಕಾಂತಿ ll 2 ll


ನೂಪರಂದಿಗೆ ಪೆಂಡೆ ಕಡಗ ಸರಪಳಿ ಗೆಜ್ಜೆ l

ರೋಪ್ಯಬುಲಕಾಯಿ ಕಿರಿಘಂಟೆ ಕಟಿಸೂತ್ರ ಸುರ l

ಚಾಪ ಮುತ್ತಿನಹಾರ ಕೌಸ್ತುಭ ತುಲಸಿಮಾಲಾ l

ಬಾಪುರಿ ಮುರಿಗೆ ಕರದ ಭೂಷಣದಿಂದೊಪ್ಪುವನ ll 3 ll


ಸರಿಗೆ ಸರಮುತ್ತು ತಾಳಿಯಾನಾನು ಹವಳ ವು l

ತ್ತರಿಕೆ ನ್ಯಾವಳ ಪದಕ ಸಿರಿವತ್ಸ ವೈಜಯಂತಿ l

ಮೆರೆವ ಹುಲಿಯುಗುರು ಕಸ್ತೂರಿ ನಾಮಕುಂಡಲಾ l

ಶಿರೋರತುನ ಶೃಂಗಾರ ಪರಿಪರಿ ಧರಿಸಿದನ ll 4 ll


ಬಾಲಗೋಪಾಲ ಕಡಗೋಲುಕರ ಅಜ ಚೆಂದ್ರಮೌಳಿ l

ಸುರಪ್ರಾಣೇಶ ಪಾಲಸಾಗರಸದನ l

ಮೂಲ ಅವತಾರಾದಿ ಅತ್ಯಂತ ಅಭೇದ l

ಶ್ಯಾಲ ವಿಜಯವಿಟ್ಠಲ ಯಿಂದೂ ll 5 ll

#ಸಿಹಿತಿನಿಸು #ತಿಂಡಿ #ಕೊಂಬು #ಮಸಾಲೆ #ಭಾರತೀಯಆಹಾರ #ರುಚಿಕರ #ಖಾರ #ಆಹಾರ #ಗೊಲ್ಲನಾದಕ್ಕಿದೇ #ಗುಣಗಳ #ತೋರಿದಿಯೋ _,_ _#ಶ್ರೀಕೃಷ್ಣ #ಮಹಿಮಾ #ಸುಳಾದಿ #ಶ್ರೀವಿಜಯದಾಸರ #ರಚನೆ, #ರಾಗ #ವರಾಳಿ


https://youtu.be/2r8lnLuII5g?si=rz3_t1TY_KlC6HeV



custom banner
pressmailtoday
Chethana Muniswamygo

Creator

*ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋ _,_ _ಶ್ರೀಕೃಷ್ಣ ಮಹಿಮಾ ಸುಳಾದಿ_ ,_ಶ್ರೀವಿಜಯದಾಸರ ರಚನೆ

#_ #INDIAN_ #Hy_ar

Comments (0)

See all
Add a comment

Recommendation for you

  • What Makes a Monster

    Recommendation

    What Makes a Monster

    BL 76.3k likes

  • Arna (GL)

    Recommendation

    Arna (GL)

    Fantasy 5.5k likes

  • Blood Moon

    Recommendation

    Blood Moon

    BL 47.9k likes

  • Earthwitch (The Voidgod Ascendency Book 1)

    Recommendation

    Earthwitch (The Voidgod Ascendency Book 1)

    Fantasy 3k likes

  • The Last Story

    Recommendation

    The Last Story

    GL 46 likes

  • The Sum of our Parts

    Recommendation

    The Sum of our Parts

    BL 8.7k likes

  • feeling lucky

    Feeling lucky

    Random series you may like

ಸನಾತನ ಸಂಸ್ಕೃತಿ
ಸನಾತನ ಸಂಸ್ಕೃತಿ

477 views0 subscribers

*ಬ್ರಹ್ಮನು ಸೃಷ್ಟಿಯ ದೇವರ ಮತ್ತು ತ್ರಿಮೂರ್ತಿಗಳಲ್ಲಿ ಒಬ್ಬ*

ಬ್ರಹ್ಮ ನು ಸೃಷ್ಟಿಯ ದೇವರು (ದೇವ) ಮತ್ತು ತ್ರಿಮೂರ್ತಿಗಳಲ್ಲಿ ಒಬ್ಬ, ಉಳಿದವರು ವಿಷ್ಣು ಮತ್ತು ಶಿವ ದೇವರು.

ವೇದಾಂತ, ಪುರಾಣ , ತತ್ತ್ವಶಾಸ್ತ್ರದಲ್ಲಿ ಬ್ರಹ್ಮನ್ ಎಂದು ಕರೆಯಲ್ಪಡುವ ಪರಮಾತ್ಮನು ಅವನ ಪತ್ನಿ ಸರಸ್ವತಿ, ಈಕೆ ಕಲಿಕೆಯ ದೇವತೆ. ಬ್ರಹ್ಮನನ್ನು ಹೆಚ್ಚಾಗಿ ವೈದಿಕ ದೇವತೆಯಾದ ಪ್ರಜಾಪತಿಯೊಂದಿಗೆ ಹೆಚ್ಚಿನ ಸಂಬಂಧ ಹೊಂದಿದ್ದಾನೆ..
#bramma #brammanandam #saraswatichandra #saraswati #sharadmalhotra #sharada #hinduism #jainstatus #jainsong

ಸೃಷ್ಟಿಯ ಪ್ರಕ್ರಿಯೆಯ ಆರಂಭದಲ್ಲಿ, ಬ್ರಹ್ಮನು ಹನ್ನೊಂದು ಸೃಷ್ಟಿಸಿದ ಪ್ರಜಾಪತಿಗಳನ್ನು ಮಾನವ ಜನಾಂಗದ ಪಿತಾಮಹರು ಎಂದು ನಂಬಲಾಗಿದೆ. ಬ್ರಹ್ಮನು ಬ್ರಹ್ಮಾಂಡದ ಸೃಷ್ಟಿಕರ್ತ ಎಂದು ಕರೆಯಲಾಗುತ್ತದೆ.

ಈತ ತ್ರಿಮೂರ್ತಿಗಳ ಮೂಲಭೂತ ಸದಸ್ಯ, ಇದರಲ್ಲಿ ವಿಷ್ಣು, ಸಂರಕ್ಷಕ ಮತ್ತು ಶಿವ, ವಿನಾಶಕ ಕೂಡ ಸೇರಿದ್ದಾರೆ. ಒಟ್ಟಾಗಿ, ಈ ಮೂರು ದೇವತೆಗಳು ಕ್ರಮವಾಗಿ ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಕಾರ್ಯಗಳನ್ನು ಪ್ರತಿನಿಧಿಸುತ್ತವೆ,.

ಸೃಷ್ಟಿಕರ್ತನಾಗಿ ಬ್ರಹ್ಮನ ಪಾತ್ರವು ಭವ್ಯ ಯೋಜನೆಯಲ್ಲಿ ಅವನ ಮಹತ್ವವನ್ನು ಒತ್ತಿಹೇಳುತ್ತದೆ.
ಬ್ರಹ್ಮನ ದೈವಿಕ ವಾಹನ ಅಥವಾ ವಾಹನವು ಹಂಸ ಎಂದು ಕರೆಯಲ್ಪಡುವ ಪವಿತ್ರ ಹೆಬ್ಬಾತು. ದೇವರುಗಳು ಮತ್ತು ಮನುಷ್ಯರಿಗೆ ಮಾತ್ರವಲ್ಲದೆ ಅಸುರರು ಎಂದು ಕರೆಯಲ್ಪಡುವ ರಾಕ್ಷಸರಂತಹ ಜೀವಿಗಳಿಗೂ ಹಲವಾರು ಆಶೀರ್ವಾದಗಳನ್ನು ನೀಡುವ ಅಸಾಧಾರಣ ಸಾಮರ್ಥ್ಯವನ್ನು ಅವನು ಹೊಂದಿದ್ದಾನೆ. ಕುತೂಹಲಕಾರಿಯಾಗಿ, ರಾಕ್ಷಸರು ಸಹ ಅವನ ದೈವಿಕ ದೇಹದ ವಿವಿಧ ಭಾಗಗಳಿಂದ ಹುಟ್ಟಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ವಿವರಿಸಲು, ರಾಕ್ಷಸ ಜನಾಂಗವನ್ನು ಬ್ರಹ್ಮನ ಪಾದದಿಂದಲೇ ಅಸ್ತಿತ್ವಕ್ಕೆ ತರಲಾಗಿದೆ ಎಂದು ನಂಬಲಾಗಿದೆ.

ಮನುಸ್ಮೃತಿ ಗ್ರಂಥವು ಇವರನ್ನು ಮರಿಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತುಜ, ವಶಿಷ್ಠ, ಪ್ರಸೇತರು ಅಥವಾ ದಕ್ಷ, ಭೃಗು ಮತ್ತು ನಾರದರ ಜನಿಕರು ಎಂದು ಪಟ್ಟಿ ಮಾಡುತ್ತದೆ. ಬ್ರಹ್ಮಾಂಡವನ್ನು ಸೃಷ್ಟಿಸಲು ಅವನಿಗೆ ಸಹಾಯ ಮಾಡಲು ಅವನು ಏಳು ಮಹಾನ್ ಋಷಿಗಳನ್ನು ಅಥವಾ ಸಪ್ತಋಷಿಗಳನ್ನು ಸೃಷ್ಟಿಸಿದನು , ಅವನ ಈ ಎಲ್ಲಾ ಪುತ್ರರು ಬ್ರಹ್ಮನ ದೇಹದಿಂದಲ್ಲ, ಅವನ ಮನಸ್ಸಿನಿಂದ ಜನಿಸಿದ ಕಾರಣ, ಅವರನ್ನು ಮಾನಸ ಪುತ್ರರು ಎಂದು ಕರೆಯಲಾಗುತ್ತದೆ.

ಪುರಾಣಗಳ ಪ್ರಕಾರ, ಬ್ರಹ್ಮನು ಬ್ರಹ್ಮಾಂಡದ ಆರಂಭದಲ್ಲಿ ವಿಷ್ಣುವಿನ ನಾಭಿಯಿಂದ ಬೆಳೆದ ಕಮಲದ ಹೂವಿನಲ್ಲಿ (ತಾಯಿಯಿಲ್ಲದೆ) ಸ್ವಯಂ-ಜನನ ಮಾಡಿದ್ದಾನೆ. ಇದು ಅವನ ಹೆಸರನ್ನು ನಭಿಜ (ನಾಭಿಯಿಂದ ಜನಿಸಿದ) ಎಂದು ವಿವರಿಸುತ್ತದೆ. ನೀರಿನಲ್ಲಿ ಜನಿಸಿದ ಬ್ರಹ್ಮನನ್ನು ಕಂಜ (ನೀರಿನಲ್ಲಿ ಜನಿಸಿದ) ಎಂದೂ ಕರೆಯುತ್ತಾರೆ.

Subscribe

32 episodes

 *ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋ _,_ _ಶ್ರೀಕೃಷ್ಣ ಮಹಿಮಾ ಸುಳಾದಿ_ ,_ಶ್ರೀವಿಜಯದಾಸರ ರಚನೆ

*ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋ _,_ _ಶ್ರೀಕೃಷ್ಣ ಮಹಿಮಾ ಸುಳಾದಿ_ ,_ಶ್ರೀವಿಜಯದಾಸರ ರಚನೆ

18 views 0 likes 0 comments


Style
More
Like
List
Comment

Prev
Next

Full
Exit
0
0
Prev
Next